ಗೂಗಲ್ ಮತ್ತು ಕನ್ನಡ ಅನುವಾದ

ನಾನು ಗೂಗಲನ ಉಪಯೋಗಿಸೋದು ಕನ್ನಡದಲ್ಲಿ. ಹುಡುಕಾಟ ಆಗ್ಲಿ, ಜೀಮೈಲ್ ಆಗ್ಲಿ ಕನ್ನಡವೇ ಇರ್ಬೇಕು. ಆದ್ರೆ ನೀವು ಗಮನಿಸಿರಬಹುದು, ಗೂಗಲ್ನ ಕನ್ನಡ  ಅನುವಾದ ತೀರ ಸಂಸ್ಕೃತಮಯವಾಗಿರತ್ತೆ. ಇದು ಕೆಲವೊಮ್ಮೆ ಆಭಾಸ ಅನ್ನಿಸತ್ತೆ.  ಈ ಕೆಲವು ಉದಾಹರಣೆಗಳನ್ನು ನೋಡಿ:

https://mail.google.com ನ ಕನ್ನಡ ಪುಟ ತೆರೆದರೆ ಕಾಣೋ ಪದಗಳು

“ಇಮೇಲ್ ಹೆಚ್ಚು ಸಹಜ ಲಬ್ಧ, ಸಮರ್ಥ ಮತ್ತು ಉಪಯುಕ್ತವಾಗಿರಬಹುದು ಎಂಬ ಯೋಚನೆಯ ಆಧಾರದಲ್ಲಿ Gmail ಅನ್ನು ನಿರ್ಮಿಸಲಾಗಿದೆ. ಅದು ತಮಾಷೆಯಾಗಿರಲೂಬಹುದು. ಅದೇನೇ ಇರಲಿ, Gmail ಇದನ್ನು ಹೊಂದಿದೆ

ಈ ಕೆಂಪು ಬಣ್ಣದ ಪದಗಳನ್ನ ಗಮನಿಸಿ. ನಾವು ಕನ್ನಡಿಗರು ‘ಲಬ್ಧ’, ‘ಸಮರ್ಥ’ ಅನ್ನೊ ಪದಗಳನ್ನ ಎಷ್ಟರ ಮಟ್ಟಿಗೆ ಬಳಸ್ತೀವಿ. ಈ ಅತೀ ಗ್ರಾಂಥಿಕತೆ ಬೇಕೆ? ‘ಅದೇನೇ ಇರಲಿ’ ಅನ್ನೋದು ‘however’ ನಿಂದ ಬಂದಂತೆ ಕಾಣುತ್ತದೆ. ಇನ್ನು ಎಣಿಸುತ್ತ ಹೋದ್ರೆ ಭಾಳ ಸಿಗತ್ತೆ. ‘ಬಳಕೆದಾರರ ಹೆಸರು’ ಇದಕ್ಕೆ ಬದಲಾಗಿ, ‘ನಿಮ್ಮ ಹೆಸರು’, ‘ಪ್ರವೇಶವನ್ನು ಪಡೆಯಿರಿ’ ಯ ಬದಲಾಗಿ ‘ಒಳಗೆ ಬನ್ನಿ’ ಅನ್ನೊ ಪದಗಳನ್ನ ಉಪಯೋಗಿಸಬಹುದಲ್ವೆ.

ಅಂತರ್ಜಾಲದಲ್ಲಿ ಕನ್ನಡದ ಅನುವಾದಕ್ಕೆ ಒಂದು ಪದಗುಚ್ಚ ಅಥವ consortium ಅನ್ನ ಕಲೆಹಾಕೋ ಅವಶ್ಯಕತೆ ಇದೆ.  ಈ ಪ್ರಯತ್ನ ನಡೆದಿದೆಯೇ?

ನಿಮ್ಮ ಟಿಪ್ಪಣಿ ಬರೆಯಿರಿ